ನಿನ್ನ ಪ್ರೀತಿಯ ಒಲೆ ಮೇಲೆ
ನನ್ನ ಮನಸ್ಸೆಂಬ ಪಾತ್ರೆಯನಿಟ್ಟು
ಅದರೊಳಗೆ ಭಾವನೆಗಳ ತುಂಬಿಸಿದೆ.
ಬೆಂಕಿ ಜೋರಾಗಿ, ಜ್ವಾಲೆಯಾಗಿ,
ಭಾವನೆಗಳ ಕುದಿಸಿತು.
ಕುದ್ದ ಭಾವನೆಗಳು ಉಕ್ಕಿ ಚೆಲ್ಲಬೇಕಿತ್ತು,
ಹಾಗಾಗದೆ, ಇಂಗಿಹೋಗಿ,
ತಳದಲ್ಲೆ ಕಪ್ಪು ಕಟ್ಟಿಕೊಂಡು,
ಎಷ್ಟು ತಿಕ್ಕಿದರೂ ಮಾಸದ ಕಲೆಯಾಗಿ ಉಳಿದುಕೊಂಡಿದೆ - ಹರಿ
1 ಕಾಮೆಂಟ್(ಗಳು):
Good one Hari! I feel when the poems are as compact and simple as this one is, the expressions will be very effective.
ಒಂದು ಕಮೆಂಟನ್ನು ಪೋಸ್ಟ್ ಮಾಡಿ