ನಿನ್ನ ನೆನಪಿನಲಿ ನಾ ಸತ್ತರು ಚಿಂತೆ ಇಲ್ಲ
ಗೆಳತಿ
ಕಾಯುತ್ತೇನೆ
ಮುಗಿಲಾಚೆಗು ಲೋಕವಿದೆ - ಹರಿ
ಮೋಡಗಳಿಲ್ಲದ ರಾತ್ರಿಯಲಿ
ಪೂರ್ಣ ಶಶಿಯ ಬೆಳದಿಂಗಳಿನಲಿ
ಬೇಸರವಾದಾಗ
ಒಂದು ಕ್ಷಣ
ನನ್ನನ್ನು ನೆನದರೆ ಸಾಕು - ಹರಿ
ಚಳಿಯಲ್ಲಿ ನಡುಗಿಸಿ
ಮಳೆಯಲ್ಲಿ ಮಿಂದಿಸಿ
ಬೇಸಿಗೆಯ ತಾಪಕ್ಕೆ
ತಳ್ಳಿದಳು ನನ್ನ ಗೆಳತಿ - ಹರಿ
ಪ್ರೀತಿಯ ಅದ್ಭುತವಾದ ಮಾಯೆಯಲಿ
ಸಿಲುಕಿ ನಾ ಈ ಲೋಕವನ್ನೇ ಮರೆತು
ಬೇರೊಂದು ಲೋಕದಲ್ಲಿ ಅಲೆಯುತ್ತಿದ್ದೇನೆ,
ಈಗಲೂ ನೀ ಎನ್ನ ನೆನೆಯುತ್ತ ಇರಬಹುದು
ಎನ್ನುವುದೊಂದೇ
ನಾ ಎನ್ನ ಮನಸ್ಸಿಗೆ ಹೇಳುತ್ತಿರುವ ಸಾಂತ್ವನ - ಹರಿ
ನನ್ನ ಹೆಸರ ನೆನೆಯ ಬೇಡ
ನೀ ನನ್ನ ನೆನೆಯಬೇಡ
ನೆನೆಯುವುದು ನನ್ನ ಕೆಲಸ
ನೆನೆದಾಗ ಬರುವುದು ನಿನ್ನ ಕೆಲಸ
ಬಂದರೂ ಬಾರದಂತಿರಬೇಡ
ಬಾರದ್ದಿದ್ದರು ಬಂದಂತಿರಬೇಡ
ನೆನಪುಗಳ ನೆನೆಯುವುದು
ಈ ಮನಕ್ಕೆ ಸಿಗುವ ಕಾಣಿಕೆ - ಹರಿ
ನೀ ನನ್ನ ಪ್ರೀತಿಸದ್ದಿದ್ದರು
ನಾ ಸತ್ತು ಮೌನವಾದರು
ನೀನೆ ಬೇಕು
ಇಲ್ಲದ್ದಿದ್ದರೆ........ - ಹರಿ
ನಿನ್ನ ನೆನಪುಗಳ ಹೊದಿಕೆ ಮಾಡಿ ಮಲಗಿದರೂ
ನಿದ್ದೆ ಬರಲಿಲ್ಲ - ಹರಿ
1 ಕಾಮೆಂಟ್(ಗಳು):
the style like of sarvagna..
liked it.. cheers!
ಒಂದು ಕಮೆಂಟನ್ನು ಪೋಸ್ಟ್ ಮಾಡಿ