ಶನಿವಾರ, ನವೆಂಬರ್ 28, 2009

ಹರಿಗವನಗಳು

ಕೊನೆಗೂ ನೀ ಇಲ್ಲವಾದೆಯ !
ಎಂಬ ಕೊರಗು ಕೊನೆವರೆಗು - ಹರಿ

ನಿನ್ ಪ್ರೀತಿಲ್ ಓ ಚೆಲ್ವೆ,
ರಾತ್ರಿ ಕಂಡ ಬಾವಿಲಿ
ಹಗಲ್ ಬಿದ್ದಂಗೆ - ಹರಿ

ಬರುಡಾಗಿರುವ ಬದುಕು,
ಬತ್ತಿಹೋಗಿರುವ ಕಣ್ಗಳು,
ಮುರಿದ ಮನಸ್ಸು
ಇವುಗಳ ನಡುವೆ ಒಂದು ಹನಿ ಪ್ರೀತಿಗೆ ಚಡಪಡಿಸುತ್ತಿರುವ ಜೀವ - ಹರಿ

ನಿನ್ನ ಕಣ್ಗಳ ಕಾಂತಿ ಇಂದ
ಅವನ ಮನೆಯೇನೋ ಬೆಳಗಿಸಿದೆ
ಆದರೆ ನಾನು ಕುರುಡನಾಗಿ ಹೋದೆ - ಹರಿ

ಕತ್ತಲೆ ಇಂದ ಬೆಳಕಾಗುವ ಮಧ್ಯದಲ್ಲಿ
ತುಸು ಹೊತ್ತು ಸರಿದುಹೋಗುವ ಕಾಮಕ್ಕೆ
ಜೀವನ ಪರ್ಯಂತ ಪ್ರೀತಿ ಎಂಬ ತಲೆ ಬರಹ - ಹರಿ