ಶನಿವಾರ, ಫೆಬ್ರವರಿ 27, 2010

ಎತ್ತಣ ಸಾಗುತಿಹೆವು?

ಎತ್ತಣ ಸಾಗುತಿಹುದೀ ಪಯಣ?
ಎತ್ತಣ ಬೀಗುತಿಹೆನು ನಾನು?

ಎತ್ತಣ ಸಾಗುತಿಹುದೀ ಬದುಕು?
ಎತ್ತಣ ಬೀಗುತಿಹುದೀ ಜೀವ?

ಕಾಣದ ದಾರಿಯಲಿ ಸಾಗುತಿಹೆನು ನಾನು .
ಕಂಡ ದಾರಿಯಲಿ ಬೀಗುತಿಹೆನು ನಾನು.

ಯಾವ ದಿಕ್ಕಿಗೆ ಈ ಜೀವನ?
ಯಾವ ದಿಶೆಗೆ ಈ ಪಯಣ?

ಕಾಣದ ದಾರಿಯಲಿ ಶೂನ್ಯದ ಕಡೆಗೊ?
ಕಂಡ ದಾರಿಯಲಿ ಅನಂತದ ಕಡೆಗೋ?

ಕಂಡ ಕನಸಿನ ಹುಡುಕಾಟದ ಕಡೆಗೊ?
ಕಾಣದ ನೆಲೆಯ ತಡಕಾಟದ ಕಡೆಗೋ?

ಸಾನಿಧ್ಯದ ತ್ಯಾಗದ ಕಡೆಗೊ?
ಸಾಮ್ರಾಜ್ಯದ ಮೋಹದ ಕಡೆಗೋ?

ಎತ್ತಣ ಸಾಗುತಿಹೆನು ನಾನು?
ಕಣ್ಣಿಗೆ ಬಟ್ಟೆ ಕಟ್ಟಿ ಬೀಗುತಿಹೆನು ನಾನು.

ಕವಲು ಒಡೆದಿರುವ ಹಲವು ದಾರಿಗಳಲಿ,
ಹುಡುಕಾಟವ ನಡೆಸುತಿಹೆನು ನಾನು.

ಜೀವನ ಎಂಬುದು ಸಾರ್ಥಕತೆಯ ಕಥೆಯೊ?
ಬದುಕು ಎಂಬುದು ವ್ಯರ್ಥದ ಭಾದೆಯೋ?

ಕತ್ತಲೆ ಇಂದ ಕಿರಣದ ಕಡೆಗೊ ?
ಬೆತ್ತಲೆ ಇಂದ ಪಾವಿತ್ರ್ಯದ ಕಡೆಗೋ?

ಹುಟ್ಟಿನ ಕಡೆಗೆ ಪಯಣವೊ ?
ಸಾವಿನ ದವಡೆಗೆ ಆತುರತೆಯೋ?

ಯಾವ ದಾರಿಯು ನನ್ನದು?
ಅನಿವಾರ್ಯ ಯಾಕದು? - ಹರಿ