ನೀ ಬರುವುದನ್ನೇ ಕಾಯುತ್ತಿದ್ದೇನೆ,
ಎಷ್ಟೋ ಮಾತುಗಳು ಆಡದೆ ಗಂಟಲಿನಲ್ಲಿ
ಸಿಕ್ಕಿ ಕೆಮ್ಮುತ್ತಿದ್ದೇನೆ,
ಇನ್ನು ಕೆಲವು ನೆತ್ತಿಗೇರಿ,
ಬಿಕ್ಕಳಿಕೆ ಶುರುವಾಗಿದೆ.
ನೀ ಬಿಟ್ಟು ಹೋದ ಹಾದಿಯಲ್ಲೇ
ಕಾಯುತ್ತಿದ್ದೇನೆ,
ಕಣ್ಣು ಕೆಂಪಾಗಿ ನೀರು ಸುರಿದರೂ,
ಕಣ್ಣು ಮಿಟಿಕಿಸುತ್ತಿಲ್ಲ.
ಕುಂತ ಜಾಗದಲ್ಲೇ ಕುಂತು,
ಸುತ್ತ ಹುತ್ತ ಕಟ್ಟುತ್ತಿದೆ,
ಜನರು ಹಾಲು ಎರೆಯುತ್ತಿದ್ದಾರೆ
ನಿನ್ನ ದಾಸನಾಗಳು ಹೊರಟಿದ್ದ ನನಗೆ
ದೇವರ ಪಟ್ಟ ಬಂದಿದೆ - ಹರಿ