ಶನಿವಾರ, ಜೂನ್ 19, 2010

ಮೊದಲ ಪ್ರಯತ್ನ

ಬರವಣಿಗೆಯಲ್ಲಿ ನನ್ನ ಪ್ರಯತ್ನ, ಬರೆದದ್ದು 19ನೆ ವಯಸ್ಸಿನಲ್ಲಿ......
ಪ್ರೇರಣೆ - ನನ್ನ ಪ್ರೇಯಸಿ.....
ಕಾಲೇಜಿನ ಮೊದಲ ದಿನ ನಾನು ಮನಸಾರೆ ಮನಸ್ಸು ಸೋತ ದಿನ :-)


ಭಾವನೆಗಳು
ನನ್ನ ಮನದೊಳಗೆ ಹುದುಗಿರುವ ಭಾವನೆಗಳು
ಅವು ಬರಿ ಭಾವನೆಗಳಲ್ಲ

ನಿನ್ನ ಮೇಲಿರುವ ನನ್ನ ಪ್ರೀತಿಯ ಚಿಲುಮೆಗಳು
ಭಾವನೆಗಳು ನೂರಾರು ಇರಬಹುದು
ಆದರೆ ಪ್ರತಿಯೊಂದು ಭಾವನೆಯು ಸೂಸುತ್ತಿದೆ
ನನ್ನ ಪ್ರೀತಿಯ ಪರಿಮಳವನ್ನು

ನಾ ಪ್ರೀತಿಸುತ್ತಿದ್ದೇನೆ ನಿನ್ನನ್ನು
ಆದರೆ ವ್ಯಕ್ತ ಪಡಿಸಲು ಆಗುತ್ತಿಲ್ಲ ನನ್ನ ಮನದಾಳದ ಭಾವನೆಗಳನ್ನು
ನನ್ನ ಮನದಾಳದ ಭಾವನೆಗಳಿಗೆ ನೀನೆ ಕಾರಣ

ನಾ ನಿನ್ನನ್ನು ದೂಷಿಸುತ್ತಿಲ್ಲ
ಬದಲಾಗಿ ಉಪಕಾರಿಯಾಗಿದ್ದೇನೆ
ಏಕೆಂದರೆ
ಪ್ರೀತಿಯೆಂಬ ಮಧುರವಾದ ಭಾವನೆಯನ್ನು ಅನುಭವಿಸಲು
ನೀನೆ ಕಾರಣ

ನನ್ನ ಭಾವನೆಗಳಿಗೆ ಎಲ್ಲೆಯೆ ಇಲ್ಲ
ಅದು ಯಾವಾಗಲು ನಿನ್ನನ್ನು ಪಡೆಯಲು
ಯತ್ನಿಸುತ್ತಿರುತ್ತದೆ

ಭಾವನೆಗಳನ್ನು ವ್ಯಕ್ತಪಡಿಸಬಹುದು
ಆದರೆ
ಮನದಾಳದ ಪ್ರೀತಿಯನ್ನು ವ್ಯಕ್ತಪಡಿಸಲು ಆಗುತ್ತಿಲ್ಲ
ನನ್ನಿಂದ
ಇದು ನನ್ನ ತಪಲ್ಲ
ತಪ್ಪೆಲ್ಲ ನನ್ನ ಮನಸಿನದು

ನನ್ನ ಮನಸಿನ ಭಾವನೆಗಳು ಶಾಂತವಾಗಿವೆ
ಅದು ಹೊರ ಚಿಮ್ಮಿದರೆ ಮುಂಗಾರಿನಲಿ
ಭೋರ್ಗರೆವ ಸಮುದ್ರದಂತೆ ಹೊರ ಹೊಮ್ಮುತ್ತದೆ
ಆಗ ಪ್ರಳಯವಾದರೂ ಆಗಬಹುದು
ಇದರಿಂದ ನಿನಗೆ ನಷ್ಟವಾದೀತು

ಪ್ರೀತಿಯೆಂಬ ತೀವ್ರತೆಯು ನನ್ನ ಕಣ್ಣುಗಳಲ್ಲಿ ಇವೆ
ನನ್ನ ಪ್ರೀತಿಯ ಎಲ್ಲೆಯನ್ನು ನೋಡ ಬಯಸುವುದಾದರೆ
ನನ್ನ ಕಣ್ಣುಗಳಲ್ಲಿರುವ ತೀವ್ರತೆಯನ್ನು ಕಾಣು ನೀ

ನನ್ನ ಮನದ ಮಧುರವಾದ
ಪ್ರೀತಿಗೆ ನನ್ನ ಕಣ್ಣುಗಳೇ ಕನ್ನಡಿ

ನಿನ್ನ ಕಣ್ಣುಗಳನ್ನು ಬಣ್ಣಿಸಲು ಸಾಧ್ಯವಿಲ್ಲ
ಸಾಕು ನನಗೆ
ನನ್ನನ್ನು ಕವಿ ಮಾಡಿದ್ದಕ್ಕೆ - ಹರಿ.