ಮಂಗಳವಾರ, ಜೂನ್ 2, 2009

ಮನದ ಅಂತರಾಳ

ಕಾರ್ಮೊಡವು ಆವರಿಸಿ ಆಗಸವ
ಕಂಗೊಳಿಸಿದೆ ಮುಗಿಲ ಅಂತರಾಳವ
ಭೋರ್ಗರೆವ ಮಳೆ ಸುರಿವ
ಕಂಗೆಡಿಸಿದೆ ಸಮುದ್ರದ ಸಂಕುಚಿತ ಭಾವವ

ಬಿರುಗಾಳಿಯ ತಡೆದು ನಿಂತಿರುವ
ಬಯಸಿ ಬಂದ ಮೋಹವ ಎದುರಿಸುವ
ಈ ಮನವ ಬಿರುಕು ಹೃದಯವ
ಶಾಪಗ್ರಸ್ಥವಾದರು ಆನಂದದ ಅನುಭವ

ಪ್ರಜ್ಞೆ ಇರದ ಪ್ರತಿಬಿಂಬವ
ಹುಡುಕಿದರೂ ದೊರಕದ ದೇವರ ಪಾದವ
ಸಾರ್ಥಕತೆಯ ಸಾರಿ ಬರದ ಜೀವವ
ಮುಷ್ಠಿಯಲ್ಲಿ ಮರಳನ್ನು ಹಿಡಿದು ಬೀರುವ

ದೃಷ್ಠಿಯಾ ದೃಷ್ಠಿ ಕೋನವನ್ನೇ ಬದಲಿಸುವ
ಏಕಾಂತತೆಯ ಏಕಾಂತವೆ ಕೈಬಿಡುವ
ಇಂತಹ ಪರಿಪಾಠವ ಸುಮ್ಮನೆ ಆಲಿಸುವ
ಮನದ ಅಂತರಾಳವನ್ನು ಬೆತ್ತಲೆಗೊಳಿಸುವ

ಕಾಮೆಂಟ್‌ಗಳಿಲ್ಲ: