ಒಮ್ಮೆ ಪ್ರೀತಿಸಿ ನೋಡಬೇಕ್ಕಿತ್ತು ನನ್ನ ಪ್ರೀತಿಯ ತೀವ್ರತೆಯ...
ನಿನ್ನ ಹೆಸರಾಗಿತ್ತು ನನ್ನ ಜೀವನ - ಹರಿ
ನಿನ್ನ ನೆನಪುಗಳ ಹಾವಳಿ ಜಾಸ್ತಿ ಆಗಿದೆ,
ಮುಸುಕು ಹಾಕಿ ಮಲಗಿದರೂ,
ನನ್ನನ್ನು ಕಾಡುತ್ತಿದೆ - ಹರಿ
ನಿನ್ನ ನೆನಪುಗಳ ಹೊದಿಕೆ ಮಾಡಿ
ಮಲಗಿದರು
ನಿದ್ದೆ ಬರಲ್ಲಿಲ್ಲ - ಹರಿ
ಹರಿ ನಾಮ ಸ್ಮರಣೆ ಇಂದ,
ಹರಿಪಾದ ಸಿಗುವುದಾದರೆ,
ನಾ ಎನ್ನ ಪ್ರೇಯಸಿಯ ಸ್ಮರಿಸುವೆ - ಹರಿ
ಮಿಥ್ಯವನುಡಿಯಲಾರೆ ಎನ್ನ ಪ್ರೇಯಸಿಗೆ,
ಅವಳು ನನ್ನ ಅಂತರಂಗದ ಕವಿತೆ - ಹರಿ
ಪ್ರೀತಿಸಿದಕ್ಕೆ ನೀನಂತು ಸಿಗಲ್ಲಿಲ್ಲ,
ಸಿಕ್ಕಿದ್ದು ಒಡೆದ ಮನಸ್ಸು,
ಬಿಳಿ ಹಾಳೆ,
ಲೇಖಣಿ,
ಮತ್ತೆ ಬಿಸಿ ನೆತ್ತರು - ಹರಿ
ನೀ ನನ್ನ ಬಿಟ್ಟು ಹೋದರು,
ನನಗೆ ಒಂಟಿತನ ಕಾಡಲಿಲ್ಲ,
ಮೂರು ಹೊತ್ತು ನಿನ್ನ ನೆನಪುಗಳ
ಮೂಟೆ ಹೊತ್ತುಕೊಂಡು ತಿರುಗುತ್ತಿದ್ದೇನೆ - ಹರಿ
1 ಕಾಮೆಂಟ್:
ನಿನ್ನ ನೆನಪುಗಳ ಹೊದಿಕೆ ಮಾಡಿ
ಮಲಗಿದರು
ನಿದ್ದೆ ಬರಲ್ಲಿಲ್ಲ
Nice..
But kansalli dina barodaadre, nidde bittu bere bekaagilla alwa?
ಕಾಮೆಂಟ್ ಪೋಸ್ಟ್ ಮಾಡಿ