ಎತ್ತಣ ಸಾಗುತಿಹುದೀ ಪಯಣ?
ಎತ್ತಣ ಬೀಗುತಿಹೆನು ನಾನು?
ಎತ್ತಣ ಸಾಗುತಿಹುದೀ ಬದುಕು?
ಎತ್ತಣ ಬೀಗುತಿಹುದೀ ಜೀವ?
ಕಾಣದ ದಾರಿಯಲಿ ಸಾಗುತಿಹೆನು ನಾನು .
ಕಂಡ ದಾರಿಯಲಿ ಬೀಗುತಿಹೆನು ನಾನು.
ಯಾವ ದಿಕ್ಕಿಗೆ ಈ ಜೀವನ?
ಯಾವ ದಿಶೆಗೆ ಈ ಪಯಣ?
ಕಾಣದ ದಾರಿಯಲಿ ಶೂನ್ಯದ ಕಡೆಗೊ?
ಕಂಡ ದಾರಿಯಲಿ ಅನಂತದ ಕಡೆಗೋ?
ಕಂಡ ಕನಸಿನ ಹುಡುಕಾಟದ ಕಡೆಗೊ?
ಕಾಣದ ನೆಲೆಯ ತಡಕಾಟದ ಕಡೆಗೋ?
ಸಾನಿಧ್ಯದ ತ್ಯಾಗದ ಕಡೆಗೊ?
ಸಾಮ್ರಾಜ್ಯದ ಮೋಹದ ಕಡೆಗೋ?
ಎತ್ತಣ ಸಾಗುತಿಹೆನು ನಾನು?
ಕಣ್ಣಿಗೆ ಬಟ್ಟೆ ಕಟ್ಟಿ ಬೀಗುತಿಹೆನು ನಾನು.
ಕವಲು ಒಡೆದಿರುವ ಹಲವು ದಾರಿಗಳಲಿ,
ಹುಡುಕಾಟವ ನಡೆಸುತಿಹೆನು ನಾನು.
ಜೀವನ ಎಂಬುದು ಸಾರ್ಥಕತೆಯ ಕಥೆಯೊ?
ಬದುಕು ಎಂಬುದು ವ್ಯರ್ಥದ ಭಾದೆಯೋ?
ಕತ್ತಲೆ ಇಂದ ಕಿರಣದ ಕಡೆಗೊ ?
ಬೆತ್ತಲೆ ಇಂದ ಪಾವಿತ್ರ್ಯದ ಕಡೆಗೋ?
ಹುಟ್ಟಿನ ಕಡೆಗೆ ಪಯಣವೊ ?
ಸಾವಿನ ದವಡೆಗೆ ಆತುರತೆಯೋ?
ಯಾವ ದಾರಿಯು ನನ್ನದು?
ಅನಿವಾರ್ಯ ಯಾಕದು? - ಹರಿ
ಎತ್ತಣ ಬೀಗುತಿಹೆನು ನಾನು?
ಎತ್ತಣ ಸಾಗುತಿಹುದೀ ಬದುಕು?
ಎತ್ತಣ ಬೀಗುತಿಹುದೀ ಜೀವ?
ಕಾಣದ ದಾರಿಯಲಿ ಸಾಗುತಿಹೆನು ನಾನು .
ಕಂಡ ದಾರಿಯಲಿ ಬೀಗುತಿಹೆನು ನಾನು.
ಯಾವ ದಿಕ್ಕಿಗೆ ಈ ಜೀವನ?
ಯಾವ ದಿಶೆಗೆ ಈ ಪಯಣ?
ಕಾಣದ ದಾರಿಯಲಿ ಶೂನ್ಯದ ಕಡೆಗೊ?
ಕಂಡ ದಾರಿಯಲಿ ಅನಂತದ ಕಡೆಗೋ?
ಕಂಡ ಕನಸಿನ ಹುಡುಕಾಟದ ಕಡೆಗೊ?
ಕಾಣದ ನೆಲೆಯ ತಡಕಾಟದ ಕಡೆಗೋ?
ಸಾನಿಧ್ಯದ ತ್ಯಾಗದ ಕಡೆಗೊ?
ಸಾಮ್ರಾಜ್ಯದ ಮೋಹದ ಕಡೆಗೋ?
ಎತ್ತಣ ಸಾಗುತಿಹೆನು ನಾನು?
ಕಣ್ಣಿಗೆ ಬಟ್ಟೆ ಕಟ್ಟಿ ಬೀಗುತಿಹೆನು ನಾನು.
ಕವಲು ಒಡೆದಿರುವ ಹಲವು ದಾರಿಗಳಲಿ,
ಹುಡುಕಾಟವ ನಡೆಸುತಿಹೆನು ನಾನು.
ಜೀವನ ಎಂಬುದು ಸಾರ್ಥಕತೆಯ ಕಥೆಯೊ?
ಬದುಕು ಎಂಬುದು ವ್ಯರ್ಥದ ಭಾದೆಯೋ?
ಕತ್ತಲೆ ಇಂದ ಕಿರಣದ ಕಡೆಗೊ ?
ಬೆತ್ತಲೆ ಇಂದ ಪಾವಿತ್ರ್ಯದ ಕಡೆಗೋ?
ಹುಟ್ಟಿನ ಕಡೆಗೆ ಪಯಣವೊ ?
ಸಾವಿನ ದವಡೆಗೆ ಆತುರತೆಯೋ?
ಯಾವ ದಾರಿಯು ನನ್ನದು?
ಅನಿವಾರ್ಯ ಯಾಕದು? - ಹರಿ
7 ಕಾಮೆಂಟ್ಗಳು:
very well framed hari...this is the perfect feeling even i feel all ways.
ದೇವರ ಆಣೆ ಗೊತ್ತಿಲ್ಲ ಗುರು
Hari, Very nice blog! I read all your work. It looks very close to heart!
ನಿತ್ಯನಿರಂತರವು ಬದುಕೆಂಬ ಪಯಣ
ಬಾಳಏರಿಳಿತಕ್ಕೆ ಇಲ್ಲ ನಿಖರ ಕಾರಣ,
ಕಾಣದ ದಾರಿಯಲಿ ಬೀಗಿದರೆ ನಾವು
ಆ ದಾರಿಯ ಅಂತ್ಯದಿ ಕಾದಿದೆ ನೋವು,
ವಿಶ್ವದೊಡಲು ನಮಗೊಂದು ಶೂನ್ಯ
ನೂರೊಂದು ದಾರಿಗಳು-ಯಾವುದು ಮಾನ್ಯ?
ಅರಿಯಲು ಬದುಕು ಮರುಕ್ಷಣವೇ ಮುಕ್ತಿ
ಅರಿವಿಗಾಗಿ ಪಯಣ-ನಿನ್ನ ಗೊಂದಲವೇ ಶಕ್ತಿ ||
to express a rose is enough.
need not to give a pot
ha ha ha ha ha ha ha hahah a ha
tumba saralavaagi aste sundaravaagi moodi bandide
great job......lifes all about these questions only i guess
ಕಾಮೆಂಟ್ ಪೋಸ್ಟ್ ಮಾಡಿ