ಡಿಗ್ರಿ ಓದಲು ಯುವರಾಜಸ್ ಗೆ ಸೇರಿದಾಗ ನನ್ನನ್ನು ಸೆಳೆದ ಹುಡುಗಿಗೆ ಬರೆದ ಪ್ರಥಮ ಪ್ರೇಮಕವಿತೆ
ನೀ ಎಂದು ಬರುವೆ ಎನ್ನ ಬಾಳಿಗೆ
ನಾ ಕಾಯುತ್ತಿರುವೆ ನಿನ್ನ ಒಲವಿಗೆ
ನಿನ್ನ ನೆನಪುಗಳ ನಕ್ಷತ್ರಗಳ ಎಣಿಸುತ್ತಿರುವೆ
ಪದೇ ಪದೇ ಆಕಾಶದಲ್ಲಿ ಬೆಳಗುತ್ತಿರುವ ಚಂದ್ರನನ್ನೆ ನೋಡುತ್ತಿರುವೆ
ಪ್ರೀತಿ ಎಂಬ ಬೆಳಕನ್ನು ಬೀರು ನೀ
ಎನ್ನ ಜೀವನವ ಸಾರ್ಥಕಗೊಳಿಸು ನೀ
ನಿನ್ನನ್ನು ನೋಡಲು ಮನವು ಹಂಬಲಿಸುತ್ತಿದೆ
ನಿನ್ನನ್ನು ಪಡೆಯಲು ಹಾತೊರೆಯುತ್ತಿದೆ
ನೀ ಎಂದು ಬರುವೆ ಎನ್ನ ಒಲವೆ
ತಿಳಿಸುವೆಯ ಎನ್ನ ಮನದಾಳದ ಸಿಹಿ ನೋವೆ
ಕಾಯುತ್ತಿದ್ದೇನೆ ಎನ್ನ ಮಾನವ ಸಮಾಧಾನಗೊಳಿಸಿ
ನೀ ಬಂದೆ ಬರುವೆ ಎಂಬ ಆಶ್ವಾಸನೆಯ ಹುಟ್ಟಿಸಿ
ಬಂದರು ಬಾರದಂತಿರಬೇಡ
ಬಾರದಿದ್ದರೂ ಬಂದಂತಿರಬೇಡ
ಇದು ನಿನ್ನ ಕೆಲಸವಲ್ಲ
ಇದೇನಿದ್ದರೂ ನಿನ್ನ ನೆನಪುಗಳ ಕೆಲಸ
ನಿನ್ನನ್ನೇ ಸದಾ ನೆನೆಯುತ್ತಿರುತ್ತೇನೆ
ನಿನ್ನನ್ನೇ ಸದಾ ಪೂಜಿಸುತ್ತಿರುತ್ತೇನೆ
ನಿನ್ನನ್ನೇ ಸದಾ ಕಾಯುತ್ತಿರುತ್ತೇನೆ
ಎನ್ನ ಪ್ರೀತಿಸದ್ದಿದ್ದರು ಸರಿಯೆ
ಬಂದು ಹೋಗುವೆಯ ಎನ್ನ ಒಲವಿನ ಸಿರಿಯೆ
ಪ್ರೀತಿಸಲು ನಾ ನಿನ್ನ ಕಾಡುವುದಿಲ್ಲ
ಪ್ರೀತಿಸಲು ನಾ ನಿನ್ನ ಬೇಡುವುದಿಲ್ಲ
ಪ್ರೀತಿಸಲು ನಾ ನಿನ್ನ ಆಜ್ಞಾಪಿಸುವುದಿಲ್ಲ
ಪ್ರೀತಿಸಲು ನಾ ನಿನ್ನ ಅಪೇಕ್ಷಿಸುವುದಿಲ್ಲ
ಪ್ರೀತಿಸಲು ನಾ ನಿನ್ನ ಆಕ್ಷೇಪಿಸುವುದಿಲ್ಲ
ಪ್ರೀತಿಸಲು ಕಾರಣ ಬೇಕಿಲ್ಲ
ಪ್ರೀತಿಸುವ ಮನಸಿದ್ದರೆ ಸಾಕು - ಹರಿ
1 ಕಾಮೆಂಟ್:
ಅವಾಗ್ಲೆ ಎಷ್ಟು ಚೆನ್ನಾಗಿ ಬರಿತಿದ್ದೆ ಹಾಗೆ ಮುಂದುವರೆಸಿದ್ರೆ ಒಳ್ಳೆ ಕವಿ ಆಗ್ತಿದ್ದೆ. ಈಗಲೂ ಕಾಲ ಮುಂಚಿಲ್ಲ ಪ್ರಯತ್ನಿಸು...
ಕಾಮೆಂಟ್ ಪೋಸ್ಟ್ ಮಾಡಿ