ಮಂಗಳವಾರ, ಡಿಸೆಂಬರ್ 15, 2009

ಕಲೆ

ನಿನ್ನ ಪ್ರೀತಿಯ ಒಲೆ ಮೇಲೆ
ನನ್ನ ಮನಸ್ಸೆಂಬ ಪಾತ್ರೆಯನಿಟ್ಟು
ಅದರೊಳಗೆ ಭಾವನೆಗಳ ತುಂಬಿಸಿದೆ.

ಬೆಂಕಿ ಜೋರಾಗಿ, ಜ್ವಾಲೆಯಾಗಿ,
ಭಾವನೆಗಳ ಕುದಿಸಿತು.
ಕುದ್ದ ಭಾವನೆಗಳು ಉಕ್ಕಿ ಚೆಲ್ಲಬೇಕಿತ್ತು,

ಹಾಗಾಗದೆ, ಇಂಗಿಹೋಗಿ,
ತಳದಲ್ಲೆ ಕಪ್ಪು ಕಟ್ಟಿಕೊಂಡು,
ಎಷ್ಟು ತಿಕ್ಕಿದರೂ ಮಾಸದ ಕಲೆಯಾಗಿ ಉಳಿದುಕೊಂಡಿದೆ - ಮನು

1 ಕಾಮೆಂಟ್‌:

Vinay ಹೇಳಿದರು...

Good one Hari! I feel when the poems are as compact and simple as this one is, the expressions will be very effective.